Psalms 134

ಸಂಧ್ಯಾಸೇವಕರಿಗೆ ಎಚ್ಚರಿಕೆ

ಯಾತ್ರಾಗೀತೆ.

1ರಾತ್ರಿಯಲ್ಲಿ ಯೆಹೋವನ ಮಂದಿರದಲ್ಲಿರುವ ಆತನ ಸರ್ವಸೇವಕರೇ,
ಬನ್ನಿರಿ, ಯೆಹೋವನನ್ನು ಕೊಂಡಾಡಿರಿ.
2 ಮಹಾಪರಿಶುದ್ಧ ಸ್ಥಳದ ಕಡೆಗೆ ಕೈಯೆತ್ತಿ,
ಯೆಹೋವನನ್ನು ಕೊಂಡಾಡಿರಿ.

3

ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನು,

ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.

Copyright information for KanULB